ಸಿಎಂ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ..?25-07-2017 157

ಮೈಸೂರು: ವೀರಶೈವ ಮತ್ತು ಲಿಂಗಾಯತರು ಬೇರೆ ಬೇರೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ, ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಸಲುವಾಗಿ  ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಲಿಂಗಾಯತ ಧರ್ಮ ಪ್ರಚಾರಕ್ಕೆ ಐದು ಮಂತ್ರಿಗಳ ನಿಯೋಜನೆ ವಿಚಾರಕ್ಕೆ, ಪ್ರತಿಕ್ರಿಯಿಸಿದ ಅವರು, ಇದು ಸರಕಾರದ ಕೀಳುಮಟ್ಟದ ಚಿಂತನೆಯಾಗಿದ್ದೂ, ಇದು ಕಾಂಗ್ರೆಸ್ ಪಕ್ಷದ ಚುನಾವಣಾ ರಣತಂತ್ರವಾಗಿದೆ, ಜನರನ್ನು ಭಾವನಾತ್ಮಕವಾಗಿ ಬದಲಾವಣೆ ಮಾಡುವ ಚಿಂತನೆಯಾಗಿದೆ ಎಂದರು. ರಾಜ್ಯ ಸರ್ಕಾರ ಲಿಂಗಾಯತ ಧರ್ಮ ಪ್ರಚಾರ ಬಿಟ್ಟು ರಾಜ್ಯದಲ್ಲಿ ಎದುರಾಗಿರುವ ಬರದ ಕಡೆ ಗಮನಹರಿಸಲಿ ಎಂದರು. ಧರ್ಮ ಪ್ರಚಾರ ಮಂತ್ರಿಗಳ ಕರ್ತವ್ಯವಲ್ಲ ಎಂದು, ಸಿಎಂ ವಿರುದ್ಧ ಕಿಡಿಕಾರಿದ್ದಾರೆ.


ಒಂದು ಕಮೆಂಟನ್ನು ಬಿಡಿ