300 ಕೋಟಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ !10-07-2017 479

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ 300 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ತಾಯಿ-ಮಗು ಆಸ್ವತ್ರೆ ಸೇರಿದಂತೆ ತಾಲ್ಲೂಕಿನಾದ್ಯಂತ ಮುನ್ನೂರು ಕೋಟಿ ವೆಚ್ಚದಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳಿಗೆ ಕಾರ್ಯಕ್ರಮ ಮೂಲಕ ಚಾಲನೆ ನೀಡಿದರು. ದೊಡ್ಡಬಳ್ಳಾಪುರ ನಗರದ ಭಗತಸಿಂಗ್ ಮೈದಾನದಲ್ಲಿ ಉಧ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಗೆ , ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ವೀರಪ್ಪ ಮೋಯ್ಲಿ, ಸ್ಥಳೀಯ ಶಾಸಕ ಟಿ.ವೆಂಟರಮಣಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉಧ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ದಲಿತರ ಮನೆಯಲ್ಲಿ ಊಟ ಮಾಡೋದು ಸುಲಭ, ಹೊಟೆಲ್ ನಲ್ಲಿ ಬ್ರೇಕ್ ಪಾಸ್ಟ್ ಮಾಡೋದು ಸುಲುಭ, ಆದ್ರೆ ಸಂವಿಧಾನ ಬದ್ದವಾಗಿ ಕೆಲಸ ಮಾಡೂದು ಅಷ್ಟು ಸುಲಭವಲ್ಲ, ಎಂದು ದಲಿತರ ಮನೆಗಳಲ್ಲಿ ಊಟ ಮಾಡುತ್ತಿರೊ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.  ನಾನು ಅಹಿಂದ ಪರವಾಗಿ ಇದ್ದೇನೆ ಎಂಬುದು ನಿಜ. ಆದ್ರೆ ಅಹಿಂದ ಜೊತೆಗೆ ರಾಜ್ಯದ ಎಲ್ಲಾ ವರ್ಗದ ಬಡ ಜನರ ಪರವಾಗಿದ್ದೇನೆ ಎಂದರು. ಪ್ರಜಾಪ್ರಭುತ್ವ ದಲ್ಲಿ ಮತದಾರರೇ ದೇವರುಗಳು. ನಟ ಡಾ.ರಾಜ್ ಕುಮಾರ್ ಅವರು ಅಭಿಮಾನಿಗಳೇ ದೇವರು ಅಂತಿದ್ರು, ನಾವೀಗ ಮತದಾರ ದೇವರುಗಳೇ ಅನ್ನಬೇಕಿದೆ. ಚುನಾವಣಾ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಂತಹ ಎಲ್ಲಾ ಭರವಸೆಗಳನ್ನು ಈಡೇರಿಸುವತ್ತ ನಮ್ಮ ಸರ್ಕಾರ ಸಾಗುತ್ತಿದೆ. ವಿರೋಧ ಪಕ್ಷಗಳು ಸುಮ್ಮನೆ ಅರೋಪ ಮಾಡುತ್ತಿವೆ, ಇದನ್ನು ಬಿಟ್ಟು ನೇರವಾಗಿ ಚರ್ಚೆಗೆ ಬರಲಿ, ಎಂದು ಚರ್ಚೆಗೆ ಆಹ್ವಾನಿಸಿದ್ದಾರೆ. ಪರಿಶಿಷ್ಟರಿಗಾಗಿ ನಮ್ಮ ಸರ್ಕಾರ 85 ಸಾವಿರ ಕೋಟಿ ಖರ್ಚು ಮಾಡಿದ್ದೇವೆ, ಇದು ದಲಿತರ ಅಭಿವೃದ್ಧಿಗಾಗಿ ನಾವು ಮಾಡಿರುವುದು, ಅದು ಬಿಟ್ಟು ಮೊಸಳೆ ಕಣ್ಣೀರು ಹಾಕಿಕೊಂಡು, ಹೋಟೆಲ್ ಊಟವನ್ನು ತಂದು ದಲಿತರ ಮನೆಯಲ್ಲಿ ತಿನ್ನುತ್ತಿದ್ದಾರೆ ಎಂದು  ಬಿಜೆಪಿಯವರ ವಿರುದ್ಧ ವ್ಯಂಗವಾಡಿದ್ದಾರೆ. ಇವೆಲ್ಲವೂ ಬಿಜೆಪಿಯವರ ನಾಟಕಗಳು. ದಲಿತರಿಗಾಗಿ ಕಂಟ್ರ್ಯಾಕ್ಟ ಕಾಮಗಾರಿಯಲ್ಲೂ ಮೀಸಲಾತಿ ತಂದಿದ್ದೇವೆ ಎಂದರು. ನಾನು ಅಹಿಂದ ಪರವಾಗಿದ್ದೇನೆ ಅನ್ನಲು ಯಾವುದೇ ಹಿಂಜರಿಕೆಯಿಲ್ಲ. ಆದ್ರೆ ರಾಜ್ಯದ ಎಲ್ಲಾ ಬಡವರ ಪರವಾಗಿ ನಾನಿದ್ದೇನೆ ಎಂದರು.


ಒಂದು ಕಮೆಂಟನ್ನು ಬಿಡಿ