ಮಾದಕವಸ್ತು ಮಾರುತ್ತಿದ್ದ ನೈಜೀರಿಯನ್ನರ ಬಂಧನ !22-06-2017 187

ಬೆಂಗಳೂರು:  ಕೊಕೇನ್, ಕೆಟಮೇನ್ ಮಾದಕವಸ್ತು ಮಾರಾಟ ಮಾಡುತ್ತಿದ್ದ ಐವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2 ಲಕ್ಷ 50 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೈಜೀರಿಯಾದ ಪೀಟರ್ ವೊಪೊಜ್ (32), ಚಿನೆಡುಜಿ (32),ಫ್ಲೈಡ್ಲೈಸ್ ಎಜ್ (36), ನಾನ್ಸ್ ಜಾಕ್ಚಿನ್ (33), ವೆಲೆಂಟೇನ್ ಚಿಂಡು (28) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 6.4 ಗ್ರಾಂ ಕೊಕೇನ್, 8 ಗ್ರಾಂ ಕೆಟಮೇನ್, 3 ಪಾಸ್ಪೋರ್ಟ್, 14 ಮೊಬೈಲ್ಗಳು, 3 ಬೈಕ್ ಗಳು ಸೇರಿ 2 ಲಕ್ಷದ 50 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ. ಆರೋಪಿಗಳು ರಾಮಮೂರ್ತಿ ನಗರ, ಟಿಸಿ ಪಾಳ್ಯ, ಚನ್ನಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಕೊಕೇನ್ ಮಾದಕ ವಸ್ತುವನ್ನು ಬೇರೆಡೆಯಿಂದ ತಂದು ನಗರದ ವಿವಿಧೆಡೆ ಸಂಚರಿಸಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ