ಕೊರೊನವೈರಸ್ ವ್ಯಾಕ್ಸಿನ್ ಮಾನವ ಬಳಕೆಗೆ ಸಿದ್ಧ!11-09-2020 191

ರಷ್ಯಾ ದೇಶದ ಸೇಚೆನೋಫ್ ಫರ್ಸ್ಟ್ ಮಾಸ್ಕೋ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ ವಿಶ್ವದ ಪ್ರಥಮ ಕೋರೋನ ವೈರಸ್ ವ್ಯಾಕ್ಸಿನ್ ಅನ್ನು ಸ್ವಯಂಸೇವಕರನ್ನು ಬಳಸಿ ಕ್ಲಿನಿಕಲ್ ಪರೀಕ್ಷೆ ಮಾಡಿ ಮುಗಿಸುವ ಮೂಲಕ ಈಗ ಜನರ ಬಳಕೆಗೆ ಸೂಕ್ತ ಎಂದು ಪ್ರಕಟಿಸಿದೆ. ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ಲೇಷನಲ್ ಮೆಡಿಸಿನ್ ಮತ್ತು ಬಯೋಟೆಕ್ನಾಲಜಿಯ ನಿರ್ದೇಶಕ  ವಾಡಿಮ್ ತರಸೋಫ್ ರಷ್ಯಾದ ಸ್ಪುಟ್ನಿಕ್ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಈ ವ್ಯಾಕ್ಸಿನ್ ಮಾನವರ ಮೇಲೆ ಪ್ರಯೋಗಿಸಲ್ಪಟ್ಟು ಯಶಸ್ವಿಯಾಗಿದೆ ಎಂಬ ವಿಚಾರ ಹೊರಬಂದಿದೆ. ಈ ವ್ಯಾಕ್ಸಿನ್ ಅನ್ನು ರಷ್ಯಾದ ಗ್ಯಾಮಲೆ ಇನ್ಸ್ಟಿಟ್ಯೂಟ್ ಫಾರ್ ಎಪಿಡೆಮೋಲಾಜಿ ಅಂಡ್ ಮೈಕ್ರೋಬಯಾಲಜಿ ತಯಾರಿಸಿದ್ದು ಅದನ್ನು ಮೆಡಿಕಲ್ ಯುನಿವರ್ಸಿಟಿ ಪರೀಕ್ಷೆಗೆ ಒಳಪಡಿಸಿತ್ತು.  ಇನ್ನೊಬ್ಬ ತಜ್ಞ ಅಲೆಕ್ಸಾಂಡರ್ ಲುಕಾಶೆಫ್ ಹೇಳಿದ ಪ್ರಕಾರ ಈ ವ್ಯಾಕ್ಸಿನ್ ಈಗ ಮಾನವ ಬಳಕೆಗೆ ಸಿದ್ಧವಾಗಿದೆ ಎಂಬುದು ಸಾಬೀತಾಗಿದೆ. ಸ್ವಯಂ ಇಚ್ಛೆಯಿಂದ ಈ ಲಸಿಕೆ ಹಾಕಿಸಿಕೊಂಡವರು ಈಗ ಒಳ್ಳೆಯ ಫಲಿತಾಂಶದೊಂದಿಗೆ ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ಈಗ ಈ ವ್ಯಾಕ್ಸಿನ್ ಅನ್ನು ಜನ ಬಳಕೆಗೆ ತಯಾರು ಮಾಡುವುದು ಹೇಗೆ ಮತ್ತು ಅದನ್ನು ಹೆಚ್ಚು ಜನರಿಗೆ ಸಿಗುವಂತೆ ಮಾಡುವುದು ಹೇಗೆ ಎನ್ನುವುದೇ ಸವಾಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದ ಈ ಕೊರೋನಾ ವೈರಸ್ ಉಂಟುಮಾಡಿದ ಅತಂತ್ರತೆಯ ಕತ್ತಲಲ್ಲಿ ಹೊಸಬೆಳಕು ಮೂಡಿದಂತಾಗಿದೆ. 

 


ಒಂದು ಪ್ರತಿಕ್ರಿಯೆಗಳು ಬಿಡಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ