ರಾಗಿಣಿಯ ಎಂಎಲ್ಸಿ ಕನಸು!10-09-2020 158

ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡದ ತಾರಾಮಣಿ ರಾಗಿಣಿ ದ್ವಿವೇದಿ ತಮ್ಮ ರಾಜಕೀಯ ನಂಟುಗಳ ಕಾರಣದಿಂದಆಗಿ ತಮ್ಮನ್ನು ಮುಟ್ಟುವವರು ಯಾರೂ ಇಲ್ಲ ಎಂದು  ಮೆರೆಯುತ್ತಿದ್ದರು. ಸಿನೆಮಾ ತಾರೆಯಾಗಿದ್ದರೂ ತಾನು ಒಬ್ಬ ಜನನಾಯಕಿ ಎಂಬಂತೆ ಪೋಸ್ ಕೊಡುತ್ತಿದ್ದ ರಾಗಿಣಿ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಆ ಪಕ್ಷದ ತಾರಾ ಪ್ರಚಾರಕಿ ಆಗಿದ್ದರೂ ಆಕೆ ಬೇರೆ ಪಕ್ಷಗಳ ಸಹವಾಸದಲ್ಲೂ ಇದ್ದಿದ್ದು ಹೊಸ ಸುದ್ದಿಯೇನಲ್ಲ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಮುಂತಾದವರನ್ನು ಭೇಟಿ ಮಾಡಿ ತನ್ನ ರಾಜಕೀಯ ವಾಂಛೆಗಳನ್ನು ಅರುಹಿಕೊಂಡಿದ್ದ ರಾಗಿಣಿ ಬಿಜೆಪಿ ತನ್ನನ್ನು ಎಂಎಲ್ಸಿ ಮಾಡದಿದ್ದರೆ ಕಾಂಗ್ರೆಸ್ ಕೈ ಹಿಡಿಯಬಹುದು ಎಂಬ ಹಗಲುಗನಸಿನಲ್ಲಿದ್ದರು.

ಅನೇಕ ಪ್ರಭಾವೀ ರಾಜಕೀಯ ನಾಯಕರುಗಳ ಮತ್ತು ಉದ್ಯಮಿಗಳ ಸಾಂಗತ್ಯದಲ್ಲಿ ಮೆರೆಯುತ್ತಿದ್ದ ರಾಗಿಣಿ ಒಂದಲ್ಲ ಒಂದು ದಿನ ತಾನು ಕೂಡ ರಾಜಕೀಯ ನಾಯಕಿ ಅಥವಾ ಮಂತ್ರಿ ಯಾಗಬಹುದು ಎಂಬ ಭ್ರಮೆಯಲ್ಲಿದ್ದರಂತೆ. ಆ ಭ್ರಮೆಗೆ ಡ್ರಗ್ಸ್ ಕೂಡ ಕಾರಣವೇ ಎಂದು ಅವರನ್ನು ಕಂಡರೆ ಆಗದವರು ಮೂಗು ಮುರಿದು ಕೇಳುತ್ತಿದ್ದಾರೆ.


ಒಂದು ಪ್ರತಿಕ್ರಿಯೆಗಳು ಬಿಡಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ